AWP ಯೋಜನೆ 2019-20ನೇ ಸಾಲಿನ 30409 ಪ್ರೌಢ ಶಾಲಾ ಶಿಕ್ಷಕರಿಗೆ ಸೇವಾನಿರತ ತರಬೇತಿ ನೀಡಲಾಗುವುದು. ಕನ್ನಡ, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ತರಬೇತಿಯ ಸಾಹಿತ್ಯ ರಚನೆಯಾಗಿದ್ದು, ಕನ್ನಡ, ವಿಜ್ಞಾನ, ಗಣಿತ ವಿಷಯಗಳ MRP ತರಬೇತಿಯನ್ನು ಮಾಡಲಾಗಿದೆ. ಹಿಂದಿ ಪ್ರಾಜೆಕ್ಟ್ – 10 ದಿನಗಳ MRP ತರಬೇತಿ ನಡೆಸಲಾಗುತ್ತಿದೆ. ಸಮಾಜ ವಿಜ್ಞಾನ ವಿಷಯದ MRP ತರಬೇತಿಯನ್ನು ಆಗಸ್ಟ್ ಕೊನೆಯ ವಾರದಲ್ಲಿ ನಡೆಸಲಾಗುವುದು.
ಪ್ರೌಢ ಶಾಲಾ ಶಿಕ್ಷಕರಿಗೆ ಸಮಾನ್ಯ ವಿಷಯ ತರಬೇತಿ ನೀಡಲು ಮಾಡ್ಯೂಲ್ ರಚಿಸುತ್ತಿದ್ದು, ಮೂರನೇ ಹಂತದ ಕಾರ್ಯಾಗಾರವನ್ನು ಆಗಸ್ಟ್ ಕೊನೆಯ ವಾರದಲ್ಲಿ ಹಮ್ಮಿಕೊಂಡಿದ್ದು, MRP ತರಬೇತಿಯನ್ನು ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುವುದು.
4707 ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಯೋಗ ತರಬೇತಿ ನೀಡಲು ತರಬೇತಿ ಸಾಹಿತ್ಯ ರಚಿಸಲು ಎರಡು ಹಂತದ ಕಾರ್ಯಾಗಾರ ಮುಗಿದಿದ್ದು, ಮೂರನೇ ಹಂತದ ಕಾರ್ಯಾಗಾರವನ್ನು ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುವುದು.
IISc ಚಳ್ಳಕೆರೆ, ಚಿತ್ರದುರ್ಗ ಇಲ್ಲಿ 10 ಜಿಲ್ಲೆಗಳ 1300 ಗಣಿತ ಮತ್ತು ವಿಜ್ಞಾನ ಪ್ರೌಢ ಶಾಲಾ ಶಿಕ್ಷಕರಿಗೆ 10 ದಿನಗಳ ಸನಿವಾಸ ತರಬೇತಿಯನ್ನು ನೀಡಲಾಗುತ್ತಿದ್ದು, ಈಗಾಗಲೇ ಮೂರು ತಂಡಗಳಿಗೆ ತರಬೇತಿ ಮುಗಿದಿದೆ.
ಪ್ರೌಢ ಶಾಲಾ ವೃತ್ತಿ ಶಿಕ್ಷಣ ಹಾಗೂ ಇತರೆ ವಿಷಯಗಳ ತರಬೇತಿ ನೀಡಲು ಸಾಹಿತ್ಯ ರಚನೆಗಾಗಿ ಸೆಪ್ಟೆಂಬರ್ ಮಾಹೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೌಢ ಶಾಲಾ 9 ಮತ್ತು 10ನೇ ತರಗತಿಯ ಎಲ್ಲಾ ವಿಷಯಗಳಿಗೆ ಕಲಿಕಾ ಫಲಗಳ ಅಭಿವೃದ್ಧಿ ಕುರಿತು ಎರಡು ಹಂತದ ಕಾರ್ಯಾಗಾರ ನಡೆಸಿದ್ದು, ಮೂರನೇ ಹಂತ ಕಾರ್ಯಾಗಾರವನ್ನು ಆಗಸ್ಟ್ ಮಾಹೆಯ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಗುಣಾತ್ಮಕ ಶಿಕ್ಷಣವನ್ನು ಪ್ರಭುತ್ವ ಮಟ್ಟದಲ್ಲಿ ಪ್ರಾಥಮಿಕ ಹಂತದಿಂದಲೇ ನೀಡಬೇಕೆಂಬ ಸದಾಶಯದೊಂದಿಗೆ ಅಳವಡಿಸಿಕೊಳ್ಳಲಾದ ಅನೇಕ ಕಾರ್ಯಕ್ರಮಗಳಲ್ಲಿ ನಲಿಕಲಿ ವಿಧಾನ ಪ್ರಮುಖವಾಗಿದೆ. ಸಂತಸ ಕಲಿಕೆ, ಸ್ವವೇಗ ಕಲಿಕೆ, ಸ್ವಕಲಿಕೆ, ಬಹುವರ್ಗಕಲಿಕೆ ಹಾಗೂ ಬಹುಹಂತದ ಕಲಿಕೆ ಎಂಬ ಐದು ಪ್ರಧಾನ ತತ್ವಗಳನ್ನು ಆಧರಿಸಿ ರೂಪುಗೊಂಡ ಶಿಶು ಹಾಗೂ ಶಿಕ್ಷಕ ಸ್ನೇಹಿ, ಚಟುವಟಿಕೆ ಆಧಾರಿತ, ಅನುಭವಕ್ಕೆ ಹೆಚ್ಚು ಒತ್ತು ನೀಡಿರುವ ಬೋಧನಾ-ಕಲಿಕಾ ಪದ್ಧತಿಯೇ ನಲಿಕಲಿ.
ಹುಟ್ಟು ಮತ್ತು ಬೆಳವಣಿಗೆಯ ಸಂಕ್ಷಿಪ್ತ ವಿವರ:
ಶಿಕ್ಷಣ ಕ್ಷೇತ್ರವನ್ನು ನಿರಂತರವಾಗಿ ಕಾಡುತ್ತಿರುವ ಬಹುವರ್ಗ ಹಾಗೂ ಬಹುಹಂತದ ಕಲಿಕೆಯ ಸವಾಲುಗಳನ್ನು ಎದುರಿಸಲು ಅವಶ್ಯಕವಾದ ಪರಿಹಾರಗಳನ್ನು ಕಂಡುಕೊಳ್ಳಲು 1995-96 ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಶಿಕ್ಷಕರ ತಂಡವು ಯುನಿಸೆಫ್ ಸಹಯೋಗದಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿಗೆ ಭೇಟಿ ನೀಡಿತು. ಮದನಪಲ್ಲಿ ತಾಲ್ಲೂಕಿನ ರಿಷಿವ್ಯಾಲಿಯಲ್ಲಿ ನಡೆಯುತ್ತಿದ್ದ ಆಶ್ರಿತ ಶಾಲೆ (ಸ್ಯಾಟಿಲೈಟ್ ಸಕೂಲ್) ಗಳಿಗೆ ಭೇಟಿ ನೀಡಿದ ಈ ತಂಡವು ಅಲ್ಲಿ ಅಳವಡಿಸಿದ ಚಟುವಟಿಕೆ, ಕಲಿಕಾ ಸಾಮಗ್ರಿ ಮತ್ತು ತರಗತಿ ನಿರ್ವಹಣಾ ಕ್ರಮಗಳ ಬಗ್ಗೆ ಅಧ್ಯಯನ ಮಾಡಿತು. ನಂತರ ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಚಟುವಟಿಕೆ, ಕಲಿಕಾ ಸಾಮಗ್ರಿ, ತರಗತಿ ನಿರ್ವಹಣಾ ಕ್ರಮವನ್ನು ಮಾರ್ಪಾಡು ಮಾಡಿಕೊಂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಯಿತು.
ನಲಿಕಲಿ ವಿಧಾನದ ವಿಶೇಷತೆ:
ನಲಿಕಲಿ ಬೋಧನಾ ಕಲಿಕಾ ಪ್ರಕ್ರಿಯೆಯು ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ಗುಣಾತ್ಮಕ ಕಲಿಕೆಯನ್ನು ಪ್ರಭುತ್ವಮಟ್ಟದಲ್ಲಿ ಉಂಟು ಮಾಡಲು ಅಗತ್ಯವಿರುವ ಅನೇಕ ಸಾಧನೋಪಕರಣಗಳನ್ನು ಒಳಗೊಂಡಿದೆ. ಈ ಸಾಧನೋಪಕರಣಗಳನ್ನು ಗುರ್ತಿಸಲು ಬಹುವರ್ಗ, ಬಹುಹಂತದ ಕಲಿಕೆ, ಕಲಿಕಾಂಶಗಳು, ಕಲಿಕಾಗೋಪುರ, ಮೈಲುಗಲ್ಲು, ಚಟುವಟಿಕೆ ಎಂಬ ವಿಶೇಷ ಹೆಸರು/ ಪದಗಳನ್ನು ಬಳಸಲಾಗಿದೆ. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 1-3 ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ 5 ದಿನಗಳ ತರಬೇತಿಯನ್ನು ನೀಡಲಾಗಿದೆ.
ಪ್ರತಿ ಜಿಲ್ಲೆಯಿಂದ ಆಯ್ಕೆಯಾದ 16 ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ತರಬೇತಿ ಸಾಹಿತ್ಯವನ್ನು ರಚಿಸಲಾಗಿದೆ.
ತಾಲ್ಲೂಕು ಹಂತದಲ್ಲಿ ಡಯಟ್ ಮೇಲ್ವಿಚಾರಣೆಯಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ. 2017-18 ಹಾಗೂ 2018-19ನೇ ಶೈಕ್ಷಣಿಕ ವರದಿಯಂತೆ ಸಮಗ್ರ ಶಿಕ್ಷಣ ಅಭಿಯಾನದಡಿಯಲ್ಲಿ ನಲಿ-ಕಲಿ ಸಂಭ್ರಮ ಕನ್ನಡ, ಉರ್ದು ಭಾಷೆ 75,327 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಗುರುಚೇತನ ತರಬೇತಿ ಅಡಿ -ಶಿಕ್ಷಕರಿಗೆ ಇಂದು ಅವರಿಗೆ ಅಗತ್ಯವಿದ್ದಲ್ಲಿ ಆದ್ಯತೆ ನೀಡಿ ಆಯ್ಕೆ ಆಧಾರಿತ ತರಬೇತಿ ಹೊಂದಲು ಅವಕಾಶವಿದೆ.
ಓದು ಕರ್ನಾಟಕ
4 ರಿಂದ 5ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ ಓದು ಕರ್ನಾಟಕ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಪ್ರಥಮ್ ಸಂಸ್ಥೆ ಹಾಗೂ ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರ ಮಾರ್ಗದರ್ಶನದಂತೆ ಡಯಟ್ನಾ ನೋಡಲ್ ಅಧಿಕಾರಿಗಳೊಂದಿಗೆ ತಮ್ಮ ಜಿಲ್ಲೆಗಳಿಗೆ ನಿಗದಿಯಾದ ಗುರಿಯನ್ನು ವಿಭಜಿಸಿಕೊಂಡು ವ್ಯವಸ್ಥಿತವಾಗಿ ಗುಣಾತ್ಮಕವಾಗಿ ಕಾರ್ಯಾಗಾರವನ್ನು ವಿವಿಧ ಹಂತಗಳಲ್ಲಿ ಆಯೋಜಿಸಲಾಗುತ್ತಿದೆ.
ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ
Learning Mathematics – A mission Programme
4 ಮತ್ತು 5ನೇ ತರಗತಿಗಳಿಗೆ ಚಟುವಟಿಕೆ ಆಧಾರಿತ ಗಣಿತ ಕಲಿಕಾ ಬೋಧನಾ ವಿಧಾನವನ್ನು ವಿಸ್ತರಿಸುವುದು
ಅಕ್ಷರ ಪ್ರತಿಷ್ಠಾನದ ಸಹಯೋಗದೊಂದಿಗೆ U್ಪಣಿತ ಕಲಿಕಾ ಆಂದೋಲನಾ ಕಾರ್ಯಕ್ರಮವನ್ನು ರಾಜ್ಯದ 6 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ಗದಗ ಹಾಗೂ ಧಾರವಾಡದಲ್ಲಿನ 6559 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ವರ್ಷಾವಾರು 1.47 ಲಕ್ಷ ವಿದ್ಯಾರ್ಥಿಗಳಂತೆ ಮೂರು ವರ್ಷಕ್ಕೆ ರೂ. 16.8 ಕೋಟಿಗಳ ವೆಚ್ಚವನ್ನು ನಿಗಧಿಪಡಿಸಿದೆ. ಸವಿವರವಾದ ಒಪ್ಪಂದವನ್ನು ಅಕ್ಷರ ಪ್ರತಿಷ್ಠಾನದೊಂದಿಗೆ ಮಾಡಿಕೊಂಡಿದೆ. ಸರ್ವ ಶಿಕ್ಷಣ ಅಭಿಯಾನದಡಿ ಲಭ್ಯವಿರುವ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.
2017-18ನೇ ಸಾಲಿನಲ್ಲಿ ರಾಜ್ಯದ 06 ಜಿಲ್ಲೆಗಳಲ್ಲಿ ಅಕ್ಷರ ಪ್ರತಿಷ್ಠಾನ ಸಹಯೋಗದೊಂದಿಗೆ 2ನೇ ಹಂತದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 4 ಮತ್ತು 5ನೇ ತರಗತಿ ಬೋಧಿಸುತ್ತಿರುವ ಗಣಿತ ಶಿಕ್ಷಕರಿಗೆ 03 ದಿನಗಳ ತರಬೇತಿಯನ್ನು ನೀಡಲಾಗಿದೆ.
2018-19ನೇ ಸಾಲಿನಲ್ಲಿ 3ನೇ ಹಂತದ 7 ಹೊಸ ಜಿಲ್ಲೆಗಳು ಸೇರಿದಂತೆ 20 ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
2019-20ನೇ ಸಾಲಿನಲ್ಲಿ ಕಳೆದ ಸಾಲಿನ ಇಕಿUIP ಅಡಿ ಮಂಜೂರಾದ 700 ಲಕ್ಷ ಅನುದಾನದ ಅಂಶವನ್ನು ಬಳಸಿ ತರಬೇತಿ ಸಂಘಟಿಸಲಾಗುತ್ತಿದೆ.
ಕಾರ್ಯಕ್ರಮದ ಉದ್ದೇಶಗಳು:
2019-20 ಎಸ್.ಎಸ್.ಎ ವಿಭಾಗದ ಶಿಕ್ಷಕರ ಮತ್ತು ಎಸ್.ಡಿ.ಎಂ.ಸಿ ಸದಸ್ಯರ ತರಬೇತಿ ಕಾರ್ಯಕ್ರಮಗಳು:
1 ರಿಂದ 8ನೇ ತರಗತಿ ಬೋಧಿಸುವ ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ 2017-18ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಗುರುಚೇತನ ಕಾರ್ಯಕ್ರಮವನ್ನು ಜಾರಿಗೆ ತಂದಿರುತ್ತದೆ. 2017-18ನೇ ಸಾಲಿನಲ್ಲಿ 1,12,530 ಶಿಕ್ಷಕರು ಹಾಗೂ 2018-19ನೇ ಸಾಲಿನಲ್ಲಿ 45,834 ಶಿಕ್ಷಕರು ವೃತ್ತಿಪರ ಅಭಿವೃದ್ಧಿಗಾಗಿ ತರಬೇತಿಯನ್ನು ಪಡೆದಿರುತ್ತಾರೆ.
2019-20ನೇ ಸಾಲಿನಲ್ಲಿ 1,66,135 ಶಿಕ್ಷಕರಿಗೆ 05 ದಿನಗಳ ಕಾರ್ಯಾಗಾರ ಮತ್ತು 05 ದಿನಗಳ ಹೋಬಳಿ ಹಂತದ ಸಮಾಲೋಚನಾ ಕಾರ್ಯಾಗಾರಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 1-3 ನೇ ತರಗತಿ ವಿಭಾಗದ ಆರಂಭಿಕ ಕಲಿಕೆಗೆ 15,000 ಶಿಕ್ಷಕರನ್ನು, ಮಾನವರನ್ನು ಏಕೆ ಸುಶಿಕ್ಷಿತರನ್ನಾಗಿ ಮಾಡುವುದು ಈ ತರಬೇತಿಗೆ 15,000 ಶಿಕ್ಷಕರನ್ನು ಜೀವನ ಕೌಶಲ ತರಬೇತಿಗೆ 13,692 ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 4-5 ನೇ ತರಗತಿ ವಿಭಾಗದ ಜೀವನ ಕೌಶಲ ತರಬೇತಿಗೆ 20,000 ಶಿಕ್ಷಕರಿಗೆ, ಗುರುಚೇತನ ತರಬೇತಿ ಅಡಿಯಲ್ಲಿ 20,541 ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 6-8 ನೇ ತರಗತಿ ವಿಭಾಗದ ಗುರುಚೇತನ ತರಬೇತಿ ಅಡಿಯಲ್ಲಿ 40,000 ಶಿಕ್ಷಕರಿಗೆ, 7ನೇ ತರಗತಿ ಗಣಿತ ಮತ್ತು ವಿಜ್ಞಾನ ಎನ್.ಸಿ.ಇ.ಆರ್.ಟಿ ಪಠ್ಯಾಧಾರಿತ 41,902 ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕ್ಲಸ್ಟರ್ ಸಮಾಲೋಚನೆ ಸಭೆಯಲ್ಲಿ ಒಟ್ಟು 166135 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೊಸದಾಗಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ(2015-16 ಹಾಗೂ 2018-19 ರ ಬ್ಯಾಚ್ವಾನರು) ಒಟ್ಟು 7,755 ಶಿಕ್ಷಕರಿಗೆ ಇಂಡಕ್ಷನ್ ತರಬೇತಿ ನೀಡುವ ಗುರಿ ಹೊಂದಲಾಗಿದೆ ಹಾಗೂ 2019-20 ರಲ್ಲಿ ಹೊಸದಾಗಿ ನೇಮಕವಾಗುವ ಅಂದಾಜು 10,000 ಶಿಕ್ಷಕರಿಗೆ ಇಂಡಕ್ಷನ್ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಎನ್.ಪಿ.ಇ.ಪಿ ಅಡಿಯಲ್ಲಿ ರಾಜ್ಯದ್ಯಾಂತ ಎಲ್ಲಾ ಡಯಟ್ ನೋಡಲ್ ಅಧಿಕಾರಿಗಳ ಮೂಲಕ ವ್ಯವಸ್ಥಿತವಾಗಿ ಮಾಹೆವಾರು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ನೀತಿಯ ಆಶಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಬಂಧಿಸಿದ ಪರಿಕಲ್ಪನೆಗನುಸಾರವಾಗಿ ಮಾಡ್ಯೂಲ್ಗುಳನ್ನು ರಚಿಸಲಾಗುತ್ತಿದೆ. ಜಿಲ್ಲಾ, ತಾಲ್ಲೂಕು, ಶಾಲಾ ಹಂತಗಳಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.
National Talent Search Examination (NTSE)
10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (National Talent Search Examination, NTSE) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು NCERT, New Delhi, ರವರ ಮಾರ್ಗದರ್ಶನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
NTSE ಪರೀಕ್ಷೆಗೆ ಅರ್ಹತೆ (Eligibility) :- :- ಪರೀಕ್ಷೆಗೆ ಅರ್ಜಿ ಹಾಕುವ ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
NTSE ಪರೀಕ್ಷೆಯ ಉದ್ದೇಶಗಳು:
ಈ ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತದೆ.
ಪ್ರಥಮ ಹಂತ: ಪ್ರಥಮ ಹಂತದ ಪರೀಕ್ಷೆಯನ್ನು ಪ್ರತಿ ವರ್ಷ ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ. 2019-20ನೇ ಸಾಲಿನ NTSE ಪರೀಕ್ಷೆಯು ದಿನಾಂಕ: 03-11-2019 ರಂದು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದೆ. 2019-20ನೇ ಸಾಲಿನ NTSE ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂಗ ಸಂಸ್ಥೆಯಾದ KSQAAC ವತಿಯಿಂದ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: kseeb.kar.nic.in Contact No: 08023341615, 235662283, 29720300
ಮೊದಲನೇ ಹಂತದ ಪರೀಕ್ಷೆಯು 2 ವಿಷಯಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ,
ಈ ವಿಷಯದ ಪರೀಕ್ಷೆಗೆ ಸಿದ್ಧವಾಗುವಾಗ ವಿದ್ಯಾರ್ಥಿಗಳು 10ನೇ ತರಗತಿಯ ಪಠ್ಯವಸ್ತು( State/CBSC/ICSE, Syllabus) ಚೌಕಟ್ಟಿನಲ್ಲಿರುವ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ State Rank ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದ್ವಿತೀಯ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ದ್ವಿತೀಯ ಹಂತ (Second Phase)
ಪ್ರಥಮ ಹಂತದ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಅರ್ಹತೆಗಳಿಸಿದ ವಿದ್ಯಾರ್ಥಿಗಳಿಗೆ National Council of Educational Research and Training, NCERT, New Delhi ರವರು ದ್ವಿತೀಯ ಹಂತದ ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ನಡೆಸುತ್ತಾರೆ. ದ್ವಿತೀಯ ಹಂತದ ಪರೀಕ್ಷೆ ವಿವರಗಳಿಗೆ NCERT Website ನಲ್ಲಿ ವೀಕ್ಷಿಸುವುದು.
ವಿದ್ಯಾರ್ಥಿ ವೇತನ : ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ ( ಪ್ರಥಮ ಮತ್ತು ದ್ವಿತೀಯ ) ಯಲ್ಲಿ ತಿಂಗಳಿಗೆ ರೂ 1,250 ಮತ್ತು ಪದವಿ ಹಂತದಲ್ಲಿ ರೂ 2,000 ಹಾಗೂ ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿವೇತನ ಯು.ಜಿ.ಸಿ ನಿಯಮಾನುಸಾರ ನೀಡಲಾಗುತ್ತದೆ.
Sl No | Year of Exam | No of Students Registered | No of Students Appeared | No of Students Qualified at State Level | No of Students Qualified at National Level |
---|---|---|---|---|---|
1 | 2004-05 | 30780 | 30295 | 235( 10TH ) | 88 |
2 | 2005-06 | 43570 | 43200 | 295( 10TH ) | 134 |
3 | 2006-07 | 62850 | 62595 | 235+295=530( 8TH +10TH ) | 74+99=173 |
4 | 2007-08 | 53970 | 53447 | 225+295=520( 8TH +10TH ) | 84+74=158 |
5 | 2008-09 | 23133 | 20010 | 231 | 104 |
6 | 2009-10 | 45443 | 41891 | 234 | 80 |
7 | 2010-11 | 50702 | 45911 | 244 | 92 |
8 | 2011-12 | 49036 | 44832 | 234 | 81 |
9 | 2012-13 | 53863 | 50711 | 223 | 64 |
10 | 2013-14 | 54341 | 51320 | 237 | 75 |
11 | 2014-15 | 71269 | 66847 | 211 | 66 |
12 | 2015-16 | 85000 | 81146 | 211 | 55 |
13 | 2016-17 | 86954 | 81954 | 225 | 62 |
14 | 2017-18 | 86300 | 84212 | 194 | 75 |
15 | 2018-19 | 103177 | 98689 | 395 | * |
(National Means- cum-Merit Scholarship) NMMS
8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (National Means cum Merit Scholarship Examination, NMMS) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
2019-20ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ: 03-11-2019 ರಂದು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂಗ ಸಂಸ್ಥೆಯಾದ KSQAAC ವತಿಯಿಂದ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: kseeb.kar.nic.in Contact No: 08023341615, 235662283, 29720300
ಅರ್ಹತೆ (Eligibility) :
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8 ನೇ ತರಗತಿ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಿಂದ ನಡೆಯುವ ವಸತಿಯುತ ಶಾಲೆಗಳ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. (ಉದಾ: ಮೊರಾರ್ಜಿ, ನವೋದಯ ಶಾಲೆ ಕೇಂದ್ರಿಯ ವಿದ್ಯಾಲಯ, ಸೈನಿಕ ಶಾಲೆ, ಇತ್ಯಾದಿ)
ಯೋಜನೆಯ ಉದ್ದೇಶಗಳು :
NMMS ಪರೀಕ್ಷೆಗೆ ಇರುವ ನಿಬಂಧನೆಗಳು :
ಆಯ್ಕೆ ಪ್ರಕ್ರಿಯೆ (Selection Procedure)
ಈ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ 9 ನೇ ತರಗತಿಯಿಂದ ತಿಂಗಳಿಗೆ ರೂ 1000 ರಂತೆ ವರ್ಷಕ್ಕೆ 12,000/- ಗಳಂತೆ 4 ವರ್ಷಗಳು ವಿದ್ಯಾರ್ಥಿವೇತನ ಸಿಗುತ್ತದೆ. (ದ್ವಿತೀಯ ಪಿ.ಯು.ಸಿ ಯವರೆಗೆ)
ವಿದ್ಯಾರ್ಥಿವೇತನ ವಿತರಣೆ :- ಆಯ್ಕೆಯಾದ ವಿದ್ಯಾರ್ಥಿಗಳ ಹೆಸರಿನಲ್ಲಿ ತೆರೆಯುವ ಬ್ಯಾಂಕ್, ಖಾತೆಗೆ ನೇರವಾಗಿ ಎಸ್.ಬಿ.ಐ, ನವದೆಹಲಿಯಿಂದ ವಿದ್ಯಾರ್ಥಿವೇತನ ಜಮಾ ಆಗುತ್ತದೆ.
ವಿದ್ಯಾರ್ಥಿವೇತನ ಮುಂದುವರಿಕೆಗೆ ನಿಬಂಧನೆಗಳು: NMMS ಪರೀಕ್ಷೆಯಲ್ಲಿ ಆಯ್ಕೆಯಾದ ಮೇಲೆ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಶೈಕ್ಷಣಿಕ ಹಿರಿಮೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿರುತ್ತದೆ.
SL No | Year Exam | No of Students Registered | No of Students Appeared | No of students Qualified at State Level |
---|---|---|---|---|
1 | 2007-08 | 12415 | 12029 | 1914 |
2 | 2008-09 | 12231 | 11492 | 1888 |
3 | 2009-10 | 35307 | 33689 | 2569 |
4 | 2010-11 | 63363 | 58122 | 3341 |
5 | 2011-12 | 64427 | 59098 | 3102 |
6 | 2012-13 | 128854 | 116111 | 5471 |
7 | 2013-14 | 112644 | 103353 | 5418 |
8 | 2014-15 | 95457 | 84875 | 5518 |
9 | 2015-16 | 105000 | 101583 | 5529 |
10 | 2016-17 | 115000 | 105000 | 5516 |
11 | 2017-18 | 121000 | 119100 | 5530 |
12 | 2018-19 | 126029 | 120077 | 5375 |
2018-19 ನೇ ಸಾಲಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಕೇಂದ್ರ ಪುರಸ್ಕೃತ ಶಿಕ್ಷಕ ಶಿಕ್ಷಣ ಯೋಜನೆಯನ್ನು SSA ಮತ್ತು RMSA ಯೊಂದಿಗೆ ವಿಲೀನಗೊಳಿಸಿ ‘ಸಮಗ್ರ ಶಿಕ್ಷಣ’ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಸಮಗ್ರ ಶಿಕ್ಷಣ ಯೋಜನೆಯಡಿ ಶಿಕ್ಷಕ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದುಕೊಳ್ಳುತ್ತಿದೆ. ಶಿಕ್ಷಕ ಶಿಕ್ಷಣವು ಸೇವಾ ಪೂರ್ವ ಶಿಕ್ಷಕ ಶಿಕ್ಷಣ ಮತ್ತು ಸೇವಾ ನಿರತ ಶಿಕ್ಷಕ ಶಿಕ್ಷಣ (ತರಬೇತಿ) ವನ್ನು ಒಳಗೊಂಡಿರುತ್ತದೆ.
ಪ್ರತಿ ವರ್ಷವು DSERT ಯಲ್ಲಿನ ಶಿಕ್ಷಕ ಶಿಕ್ಷಣ ಕೋಶವು ಎಲ್ಲಾ ಡಯಟ್ ಗಳೊಂದಿಗೆ ಸಮನ್ವಯ ಸಾಧಿಸಿ ಆಯಾ ಡಯಟ್ ನ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯವನ್ನು ಸಿದ್ದಪಡಿಸಲು ನೆರವಾಗುತ್ತಿದೆ. ಎಲ್ಲ ಡಯಟ್ ಗಳ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯಗಳನ್ನು ಕ್ರೋಢೀಕರಿಸಿ DSERT ಯ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯದೊಂದಿಗೆ MHRD ಯ PAB ಗೆ ಅನುಮೋದನೆಗಾಗಿ ಸಲ್ಲಿಸ ಲಾಗುತ್ತದೆ.
ಸಂಶೋಧನೆ
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾರ್ಗ ಸೂಚಿಯಂತೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರತಿಯೊಬ್ಬ ಬೋಧಕ ಸಿಬ್ಬಂದಿಯು ಸಂಶೋಧನಾ ಅಧ್ಯಯನವನ್ನು ಕೈಗೊಳ್ಳ ಬೇಕಾಗಿದೆ.
2019-20 ನೇ ಸಾಲಿನಲ್ಲಿ ಎಲ್ಲಾ ಡಯಟ್ ಗಳಲ್ಲೂ ಈ ಕೆಳಗೆ ನಮೂದಿಸಿರುವ ಹತ್ತು ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದಕ್ಕಾಗಿ ಗುರುತಿಸಲಾಗಿದೆ.
2019-20ನೇ ಸಾಲಿನಲ್ಲಿ ಶಿಕ್ಷಕ ಶಿಕ್ಷಣ ಯೋಜನೆಯಡಿ ಕೈಗೊಳ್ಳಬೇಕಾದ ಸಂಶೋಧನಾ ಅಧ್ಯಯನಗಳ ವಿವರ:
ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು
2019-20 ನೇ ಸಾಲಿನಲ್ಲಿ ಈ ಕೆಳಗೆ ನಮೂದಿಸಿರುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಎಲ್ಲ ಡಯಟ್ ಗಳಿಗೂ ಮಾರ್ಗದರ್ಶನ ನೀಡಲಾಗಿದೆ.
2019-20ನೇ ಸಾಲಿನಲ್ಲಿ ಶಿಕ್ಷಕ ಶಿಕ್ಷಣ ಯೋಜನೆಯಡಿ ಅನುಷ್ಠಾನಗೊಳಿಸುವ ಕಾರ್ಯಕ್ರಮ ಮತ್ತು ಚಟುವಟಿಕೆಗಳ ವಿವರ.
ತಾಂತ್ರಿಕ ನೆರವು
ಪ್ರತಿ ವರ್ಷ ಹತ್ತು ಡಯಟ್ ಗಳಂತೆ 2018-19 ನೇ ಸಾಲಿನಿಂದ 2020-21ನೇ ಸಾಲಿನವರೆಗೆ ರೂ. 8.80 ಲಕ್ಷಗಳನ್ನು ನೀಡಲಾಗುತ್ತದೆ. ರೂ. 8.80 ಲಕ್ಷಗಳಲ್ಲಿ ರೂ. 6.40 ಲಕ್ಷಗಳನ್ನು ಅನಾವರ್ತಕ ಘಟಕಗಳಿಗೆ ಮತ್ತು ರೂ. 2.20 ಲಕ್ಷಗಳನ್ನು ಆವರ್ತಕ ಘಟಕಗಳಿಗೆ ಬಳಸಬಹುದಾಗಿದೆ.
2018-19 ನೇ ಸಾಲಿನಲ್ಲಿ ತಾಂತ್ರಿಕ ನೆರವಿಗಾಗಿ ಅನುದಾನವನ್ನು ಪಡೆದ ಡಯಟ್ ಗಳು:
ಡಯಟ್ ಕೂಡಿಗೆ, ಡಯಟ್ ಬೆಳಗಾಂ, ಡಯಟ್ ಕುಮಟ, ಡಯಟ್ ತುಮಕೂರು, ಡಯಟ್ ದಾವಣಗೆರೆ, ಡಯಟ್ ಹಾಸನ, ಡಯಟ್ ಬೀದರ್, ಡಯಟ್ ಚಾಮರಾಜನಗರ, ಡಯಟ್ ಗದಗ, ಡಯಟ್ ಯಾದಗಿರಿ
2019-20 ನೇ ಸಾಲಿನಲ್ಲಿ ತಾಂತ್ರಿಕ ನೆರವಿಗಾಗಿ ಅನುದಾನವನ್ನು ಪಡೆದ ಡಯಟ್ ಗಳು:
ಡಯಟ್ ಬೆಂಗಳೂರು ನಗರ, ಡಯಟ್ ಇಳಕಲ್, ಡಯಟ್ ಮೈಸೂರು, ಡಯಟ್ ಮಂಡ್ಯ, ಡಯಟ್ ಶಿವಮೊಗ್ಗ, ಡಯಟ್ ಮಂಗಳೂರು, ಡಯಟ್ ಬಿಜಾಪುರ, ಡಯಟ್ ಗುಲ್ಬರ್ಗಾ, ಡಯಟ್ ಯೆರಮರಸ್, ಡಯಟ್ ರಾಮನಗರ.
ತಾಂತ್ರಿಕ ನೆರವಿಗಾಗಿ ಆಯ್ಕೆಯಾದ ಡಯಟ್ ಗಳಿಗೆ ಪ್ರತಿ ವರ್ಷ ರೂ. 2.40 ಲಕ್ಷಗಳನ್ನು ಆವರ್ತಕ ಅನುದಾನದ ರೂಪದಲ್ಲಿ ಒದಗಿಸಲಾಗುವುದು.
ಕರ್ನಾಟಕ ರಾಜ್ಯ ಸರ್ಕಾರವು ಸೇವಾನಿರತ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಮರು ಸಂಯೋಜಿಸುವ ಪ್ರಯತ್ನವನ್ನು ಮಾಡಿದೆ. ಎ.ಪಿ.ಎಫ್ ನ ಸಹಕಾರದೊಂದಿಗೆ ಟಿ.ಟಿ.ಎಂ.ಎಸ್ ಅನ್ನು ಅಳವಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದೆ.
ಅ) ನೂತನ ಕಾರ್ಯಕ್ರಮದ ಮುಖ್ಯ ಅಂಶಗಳು
ಆ) ಕಾರ್ಯಾಚರಣೆಯ ಮುಖ್ಯಾಂಶಗಳು
ಇ) ಇದುವರೆಗಿನ ಪ್ರಗತಿ
ಈ) 2018-19ನೇ ಸಾಲಿನ ಯೋಜನೆ
View this page in English
ನವೀಕರಿಸಿದ ದಿನಾಂಕ : 6/9/2019